ಗುರುವಾರ, ಸೆಪ್ಟೆಂಬರ್ 30, 2010

ಅಯೋಧ್ಯೆ  ತೀರ್ಪಿನ್ ಬಗ್ಗೆ   ಆತಂಕ ...
ಎಸ.ಎಂ.ಎಸ. ಮೂಲಕ  ಸೌಹಾರ್ದತೆಗೆ ಪ್ರಯತ್ನ ...



ಆತ್ಮಿಯರೇ, 
   
       ಸೆಪ್ಟೆಂಬರ್  ೨೩ ರಂದು  ಬೆಳ್ಳಿಗ್ಗೆ  ನನ್ನ  ಮೊಬೈಲ್ ಗೆ  ಬಸವರಾಜ್ ಬಲ್ಲೂರ್   ಅವರ ಎಸ.ಎಂ.ಎಸ. ಬಂತು. ಹಾಗೆ ನೋಡಿದರೆ, ಅವರು ಆಗಾಗ್  ಸದ್ವಿಚಾರ್  ಮತ್ತು  ಸದ್ಭಾವನೆ  ಮೂಡಿಸುವ  ಸಂದೇಶಗಳನ್ನು  ಕಳುಹಿಸುತ್ತಾರೆ. ಆದರೆ ಇಂದು  ಅವರು ಕಳುಹಿಸಿದ ಮೆಸೇಜ್ ಗೆ  ಅದರದ್ದೆಯಾದ್  ಮಹತ್ವ   ಇತ್ತು.   ಅಯೋಧ್ಯೆಯ    ರಾಮ್ ಮಂದಿರದ  ಬಗ್ಗೆ ೨೪ ರಂದು ತೀರ್ಪು ಬರಬೇಕಾಗಿತ್ತು ( ನಂತರ ತೀರ್ಪನ್ನು  ಮುಂದೂಡಲಾಯಿತು ) ಬಲ್ಲೂರ್  ಅವರು ಸಹಜವಾಗಿಯೇ ಎಲ್ಲರಂತೆ ತೀರ್ಪಿನಿಂದ ಆಗುವ ಪರಿಣಾಮದ ಬಗ್ಗೆ  ಆತಂಕಕ್ಕೆ  ಒಳಗಾಗಿದ್ದರು .
         ಅದಾದ ನಂತರ  ರುದ್ರಮಣಿ ಮಠಪತಿ  ಅವರ ಮೆಸೇಜ್  ಬಂತು. ನಂತರ ಅಲ್ಲಾವುದ್ದೀನ್ ಪಟೇಲ್ ಮೆಸೇಜ್ ಕಳುಹಿಸಿದರು. ನಂತರ  ಅವರು, ಇವರು ಹೀಗೆ ಹತ್ತಾರು ಜನರು ಮೆಸೇಜ್  ಕಳುಹಿಸಿದರು. ತೀರ್ಪು  ಹೇಗೇ ಬರಲಿ. ಶಾಂತಿ ಕಾಪಾಡಿಕೊಂಡು ಹೋಗಬೇಕು ಎಂದೇ ಎಲ್ಲರೂ  ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ್ದರು. ಹಾಗೆ ನೋಡಿದರೆ
  ` ಈಶ್ವರ್  ಅಲ್ಲಾ ತೇರಾ  ನಾಮ್ . ಸಬಕೋ ಸನ್ಮತಿ ದೇ ಭಗವಾನ್ '
ನ್ನುವ ಮಹಾತ್ಮಾ ಗಾಂಧೀಜಿ ಅವರಿಗೆ  ಪ್ರಿಯವಾಗಿದ್ದ  ಭಜನೆಯ ಹಾಡು ಎಸ.ಎಂ.ಎಸ. ಮೂಲಕ ಎಲ್ಲೆಡೆ  ಹೆಚ್ಹಾಗಿ ಹರಿದಾಡಿತು.  ತೀರ್ಪು ಏನೇ ಬಂದರೂ ಎಲ್ಲೆಡೆ ಶಾಂತಿ ನೆಲೆಸುವಂತೆ ಆಗಲು  ಪೋಲಿಸ್   ಬಿಗಿ ಬಂದೋಬಸ್ತ ಏರ್ಪಡಿಸಲಾಗಿತ್ತು.  ಜತೆಯಲ್ಲಿಯೆ ನಾಗರಿಕರು  ಎಸ.ಎಂ.ಎಸ. ಸೇವೆಯ ಸದುಪಯೋಗ   ಮಾಡಿಕೊಂಡು  ಜನರಲ್ಲಿ ಸದ್ಭಾವನೆಯ  ವಾತಾವರಣ   ನಿರ್ಮಿಸಲು ಪ್ರಯತ್ನ ಮಾಡಿರುವದು  ಕಂಡು ಬಂತು.
`ಚಹರೆ ನಹಿ  ಇನ್ಸಾನ್ ಪಡೆ  ಜಾತೆ  ಹೈ.  ಮಜಹಬ್  ನಹಿ ಇಮಾನ್ ಪದೇ  ಜಾತೆ ಹೈ.  ಭಾರತ ಏಕ ಐಸಾ ದೇಶ ಹೈ ಜಹಾ ಗೀತಾ ಔರ್  ಕುರಾನ್  ಏಕ  ಸಾಥ್  ಪಡೆ ಜಾತೆ   ಹೈ.  ಎಂದು ಕೆಲವರು  ಮೆಸೇಜ್ ಕಳುಹಿಸಿದ್ದರು.
ಇನ್ನು ಕೆಲವರು
 `ಮಂದಿರ್ ಮಸೀದಿ  ಜಗಳದಲ್ಲಿ ಮಾನವರೇ ಒಂದಾಗಿ. ದೇವರು ನಮ್ಮೊಳಗೇ ಇದ್ದಾನೆ ಕಟ್ಟಡಗಳಲ್ಲಿ  ಇಲ್ಲ '
`ರಾಮ್ ರಹೀಂ ಬೇರೆ ಇಲ್ಲ.  ತಿಳಿದು ನಡೆದರೆ ಜಗಳವಿಲ್ಲ'
   ' ಮಂದೀರ್  ಮಸೀದಿ  ಕೆಡವಬಹುದು ಕಟ್ಟಬಹುದು. ಆದರೆ  ಒಡೆದ ಮನಸ್ಸುಗಳನ್ನು ಕಟ್ಟಲು ಆಗುವದಿಲ್ಲ' 

   'ಕಟ್ಟಡ  ಸಾಕು  ಈಗ  ಮನಸ್ಸುಗಳನ್ನು   ಕಟ್ಟೋಣ, ರಾಮ್,  ರಹೀಂರನ್ನು   ಹೃದಯದಲ್ಲಿ   ಇರಿಸೋಣ'
` ವಿವಿಧತೆಯಲ್ಲಿ ಎಕತೆಯೇ  ಭಾರತೀಯತೆ'  
ಎಂದು ಹಾಗೂ  ಇನ್ನೊಬ್ಬರು
`ನೋ ಮಂದಿರ್ ನೋ ಮಸ್ಜೀದ್ ಓನ್ಲಿ ಇಂಡಿಯ' ಎಂದು ಎಸ.ಎಂ.ಎಸ. ಕಳುಹಿಸಿದ್ದರು.
`ಹಿಂದ ದೇಶಕೆ ನಿವಾಸಿ ಸಭಿಜನ ಏಕ ಹೈ'ಎಂದು  ಇನ್ನೊಂದರಲ್ಲಿ ನೆನಪು ಮಾಡಿಕೊಡಲಾಗಿತ್ತು .
ಸಮಾಜದ ಏಕತೆ ಮತ್ತು ದೇಶದ  ಅಖಂಡತೆಗಾಗಿ ಮಹಾತ್ಮರು, ಶರಣರು, ಸಂತರು, ಸಮಾಜ್ ಸುಧಾರಕರು ಸಾರಿದ ತತ್ವಗಳು.  ವಚನ , ಕವಿತೆಯ  ಸಾಲುಗಳು, ದೊಹೆಗಳ ಸಾಲುಗಳು  ಮನಸ್ಸಿಗೆ ನಾಟುವಂತೆ ಇದ್ದವು. ಮೆಸೇಜ್ ಗಳನ್ನು  ಬೇರೆಯವರಿಗೆ   ಫಾರ್ವರ್ಡ್ ಮಾಡಿ ಎಂದು ಸಹ ಬರೆಯಲಾಗಿತ್ತು.
ಇಚೆಗೆ  ಹಬ್ಬಗಳಿಗೆ,ಹುಟ್ಟು ಹಬ್ಬಕ್ಕೆ ಮೆಸೇಜ್ ಕಳುಹಿಸುವುದು  ಮಾಮೂಲಾಗಿದೆ.  ಕೆಲವರು  ಸಮಾರಂಭಗಳ ಮತ್ತು ಸಭೆಗಳ ಮಾಹಿತಿ ಸಹ ಎಸ.ಎಂ.ಎಸ.ಮೂಲಕವೇ  ತಿಳಿಸುತಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ  ಇದರ ದುರೂಪಯೋಗ ಆಗುತ್ತಿದೆ . ಅದ್ದರಿಂದ  ಅಯೋಧ್ಯೆ ತೀರ್ಪು ಪ್ರಕಟವಾಗುವ ಸೆಪ್ಟೆಂಬರ್  ೨೪ ರಿಂದ ಕೆಲವು ದಿನಗಳವರೆಗೆ ಮೆಸೇಜ್ ಸೇವೆ ಬಂಧ ಮಾಡಲಾಗುವದು ಎಂದು ತಿಳಿಸಲಾಗಿತ್ತು. ಆದ್ದರಿಂದ ೨೩ ರಂದು ಬಹಳಷ್ಟು  ಜನರು ಮೆಸೇಜ್ ಕಳುಹಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ನ್ಯಾಯಾಲಯದ ತೀರ್ಪು ಮುಂದೆ  ಹೋಗಿದೆ  ಎಂಬ  ವಿಷಯ  ಅಂದು ಸಂಜೆ ಗೊತ್ತಾಯಿತು. ಆಗ ಒಬ್ಬರು ಕಳುಹಿಸಿದ ಸಂದೇಶ  `ಆಜ್ ನಹಿತೋ ಕಲ  ಫೈಸಲಾ ಆಯೆಗಾಹಿ. ಹಮಾರಿ  ಸುನೆಂಗೆ  ನಹಿ  ತುಮಾರಿ  ಸುನೆಂಗೆ . ವಹೀ  ಹೋಗಾ ಜೋ ಕೋರ್ಟ್  ಕಹೇಗಾ' ಎಂದಿತ್ತು.   ನಮಸ್ಕಾರಗಳು  ..................