ಗುರುವಾರ, ಜುಲೈ 21, 2011

ಪುಸ್ತಕಗಳ ಮುಖಪುಟ ವಿನ್ಯಾಸ...




     ಕಂಪ್ಯೂಟರಗಳು 
    ಬಂದಮೇಲೆ  
    ಚಿತ್ರಕಲಾವಿದರು 
     ಪುಸ್ತಕಗಳ 
     ಮುಖಪುಟ 
     ರಚಿಸುವುದು ತಪ್ಪಿದೆ.
     ಚಿತ್ರಕಲೆ ಕಲಿಯದ 
      ನನ್ನಂಥವರು 
     ಸಹ ಕಂಪ್ಯೂಟರನ
      ಕೀಲಿಮಣಿ ಮತ್ತು 
     ಮೌಸ್ ಬಳಸಿ 
     `ಫೋಟೊಶಾಪ್'ನಲ್ಲಿ 
     ಮುಖಪುಟ
     ವಿನ್ಯಾಸ ಮಾಡುವುದು 
       ಸಾಧ್ಯವಾಗಿದೆ. 
    ಹಾಗೆ ನೋಡಿದರೆ 
     ಪುಸ್ತಕದಲ್ಲಿನ ವಿಷಯ, 
      ಕೃತಿಕಾರನ ಆಶಯಕ್ಕೆ 
      ತಕ್ಕಂತೆ 
      ಮುಖಪುಟ ರಚಿಸುವುದು 
     ಕಷ್ಟಸಾಧ್ಯ 
     ಕೆಲಸವೇ ಆಗಿದೆ. 
      ಆದರೂ ನಾನು 
      ರಚಿಸಿಕೊಟ್ಟ 
     ಮುಖಪುಟ ಮತ್ತು 
     ಹಿಂಬದಿಪುಟವನ್ನು  
      ಮಿತ್ರರಾದ 
    ವೀರಣ್ಣ ಮಂಠಾಳಕರ್ 
    ಹಾಗೂ ಕವಯತ್ರಿ 
    ಮಲ್ಲೇಶ್ವರಿ ಉದಯಗಿರಿ 
    ಅವರು ತಮ್ಮ ಪುಸ್ತಕಗಳಿಗೆ 
     ಅಳವಡಿಸಿ ಮುದ್ರಿಸಿದ್ದಾರೆ.
    ನಾನು ರಚಿಸಿಕೊಟ್ಟ 
     ವೀರಣ್ಣ ಮಂಠಾಳಕರ್ 
    ಅವರ  6 ನೇ ಕೃತಿ 
    `ಬದುಕಿನ ಬೆನ್ನೇರಿ' 
      ಕಥಾ ಸಂಕಲನ 
         ಮತ್ತು 
    ಮಲ್ಲೇಶ್ವರಿ ಉದಯಗಿರಿ ಅವರ 
     3 ನೇ ಕವನ ಸಂಕಲನ 
         `ಭಾವಂಕರ್ಷ'ದ 
      ಮುಖಪುಟ ಮತ್ತು 
     ಬೆನ್ನುಪುಟದ ಚಿತ್ರ ಇಲ್ಲಿ 
       ಕೊಡಲಾಗಿದೆ.
    ಉದಯಗಿರಿ ಅವರ 
      ಪುಸ್ತಕದ ಬೆನ್ನುಡಿ 
      ಸಹ  ನಾನು ಬರೆದಿದ್ದೇನೆ.
  ಈ ಎರಡೂ ಪುಸ್ತಕಗಳನ್ನು 
    2011ನೇ ಸಾಲಿನ 
       ಫೆಬ್ರುವರಿಯಲ್ಲಿ 
     ಬಸವಕಲ್ಯಾಣ ತಾಲ್ಲೂಕಿನ 
     ಬೇಲೂರನಲ್ಲಿ ನಡೆದ 
   ಉರಿಲಿಂಗಪೆದ್ದಿ ಉತ್ಸವದಲ್ಲಿ 
     ಬಿಡುಗಡೆ 
     ಮಾಡಲಾಯಿತು. 
     ಉರಿಲಿಂಗಪೆದ್ದಿ ಮಠ ಟ್ರಸ್ಟ್ ನಿಂದ 
     ಇವನ್ನು ಪ್ರಕಟಿಸಲಾಗಿದೆ. 
      ಪುಸ್ತಕ ಬಿಡುಗಡೆ 
       ಸಮಾರಂಭದಲ್ಲಿ 
       ಭಾಲ್ಕಿಯ 
    ಬಸವಲಿಂಗ ಪಟ್ಟದ್ದೇವರು, 
        ಬೇಲೂರ 
     ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ, 
      ಬಸವಕಲ್ಯಾಣದ 
      ಸರಕಾರಿ  ಪದವಿ ಕಾಲೇಜಿನ 
     ಪ್ರಾಚಾರ್ಯ ನಾಗೇಂದ್ರ ಢೋಲೆ, 
     ಮಹಾಂತೇಶ ನವಲಕಲ್, 
     ನಗರಸಭೆ ಸದಸ್ಯ 
      ಸೂರ್ಯಕಾಂತ ಚಿಲ್ಲಾಬಟ್ಟೆ 
     ಮುಂತಾದವರು 
       ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ  
       ವೀರಣ್ಣ ಮಂಠಾಳಕರ್ 
    ಹಾಗೂ ಮಲ್ಲೇಶ್ವರಿ ಉದಯಗಿರಿ 
     ಅವರನ್ನು 
      ಸನ್ಮಾನಪತ್ರ ಕೊಟ್ಟು 
       ಸತ್ಕರಿಸಲಾಯಿತು.
      ವಿಜಯಲಕ್ಷ್ಮಿ ಗಡ್ಡೆ ಅವರ
      `ಉರಿಲಿಂಗಪೆದ್ದಿ ವಚನಗಳ 
          ಅಂತರಂಗ' 
       ಪುಸ್ತಕಕ್ಕೆ ಮತ್ತು 
        ಕಥೆಗಾರ 
      ಮಹಾಂತೇಶ  ನವಲಕಲ್ ಅವರ
       'ಉರಿಲಿಂಗ ದೇವರು, 
        ಉರಿಲಿಂಗ ಪೆದ್ದಿ 
       ಮತ್ತು ಕಾಳವ್ವೆ 
       ವಚನಗಳ ಸಂಗ್ರಹ' 
     ಪುಸ್ತಕಕ್ಕೆ ನಾನು ರಚಿಸಿದ 
       ಮುಖಪುಟ ಸಹ 
      ಇಲ್ಲಿ  ಕೊಟ್ಟಿದ್ದೇನೆ. 
     ಈ ಎರಡೂ 
        ಪುಸ್ತಕಗಳು ಇನ್ನೂ 
     (ಜುಲೈ 2011 ರವರೆಗೆ) 
      ಪ್ರಕಟವಾಗಿಲ್ಲ. 
      ಇದಲ್ಲದೆ ನಾನು 
       ಸಿದ್ಧಪಡಿಸಿದ 
       ಪ್ರಶಸ್ತಿ ಪತ್ರದ 
        ನಮೂನೆಯನ್ನು 
       ಸಹ ಇಲ್ಲಿ 
       ಕೊಟ್ಟಿದ್ದೇನೆ.

1 ಕಾಮೆಂಟ್‌:

ವೀರಣ್ಣ ಮಂಠಾಳಕರ್ ಹೇಳಿದರು...

ನಿಮ್ಮ ಬಹು ಮುಖ ಪ್ರತಿಭೆಯನ್ನು ಕಂಡು ಯಾರು ಬಾಕಾದರೂ ಹೇಳಬಹುದು ಬುೀೆ ಅವರು ಕೇವಲ ಪತ್ರಕತ೯ರಲ್ಲ, ಕಲಾವಿದರೂ, ಸಾಹಿತಿಗಳು, ಅಷ್ಟೇ ಅಲ್ಲ ಸರಳ ಭಾವನಾಜೀವಿಯಾಗಿ ಅಗೋಚವಾದ ಮಾಂತ್ರಿಕ ಶಕ್ತಿ ನಿಮ್ಮಲಿದೆ. ಪ್ರತಿಭಾವಂತರನ್ನು ಬೆಳೆಸುವ ಸಂಕಲ್ಪ ನಿಮ್ಮೊಳಗಿರುವುದು ವಿಶೇಷ. ಆದರೆ ಸ್ತಳೀಯ ಜನಪ್ರತಿನಿಧಿಗಳ ಕಣ್ಣಲ್ಲಿ ನಿಮ್ಮಂಥ ಪ್ರತಿಭಾವಂತರು ಕಾಣದೇ ಇರುವುದು, ಮತ್ತು ಕಳಪೆ ಜನರನ್ನು ಎತ್ತಿ ಹಿಡಿಯುವ ಕಾಲ ಇದಾಗಿದೆ. ನಿಮ್ಮ ಪ್ರಯತ್ನ ಮಾತ್ರ ಯಾವತ್ತೂ ಶಾಶ್ವತ. ಅದೇ ಬದುಕಿನ ನೆಮ್ಮದಿಗೆ ಆಸರೆಯಾಗಬಲ್ಲದು.

ವೀರಣ್ಣ ಮಂಠಾಳಕರ್