ಶುಕ್ರವಾರ, ಅಕ್ಟೋಬರ್ 15, 2010

ನಿಜಸ್ಥಿತಿ ವಿಚಾರಿಸಲಿಲ್ಲ ..!!



ಪುಸ್ತಕ ಭಾರ ಹೆಚ್ಚಿತು
ಹಳೆಯ ಪಾಟಿಚೀಲ ಹರಿಯಿತು.
ಅಪ್ಪ ಅವ್ವನ ಕಷ್ಟ ನೋಡಿ 
ಹೊಸ ಚೀಲ ಬೇಡಲು 
ಮನಸ್ಸು ಹೆದರಿತು.
ಚಿಂತೆಯಲ್ಲಿದ್ದಾಗ 
ಉಪಾಯವೊಂದು ಹೊಳೆಯಿತು.
ಮನೆ ಮೂಲೆಯಲ್ಲಿನ 
ಗೊಬ್ಬರ ಚೀಲ ಹೆಗಲಿಗೇರಿತು.
ಅಕ್ಷರ ಕಲಿಯುವ ಉತ್ಸಾಹದಲ್ಲಿ 
ಚೀಲದ ಚಿಂತೆ ದೂರಾಯಿತು.
ಅಂತು ಸಾಲಿ ತಪ್ಪಿಸದಂಗಾಯ್ತು.
ಹಾದಿ ಬೀದಿಯಲ್ಲಿ 
ಎಲ್ಲರೂ ನೋಡಿದರು.
ಇಂಥ ಚೀಲ ಯಾಕೆಂದು 
ಶಿಕ್ಷಕರು ಹೊಡೆದರು.
ಒಬ್ಬರೂ ನಿಜಸ್ಥಿತಿ ವಿಚಾರಿಸಲಿಲ್ಲ
ಕರುಣೆ ತೋರಿ 
ಚೀಲವೊಂದನ್ನು ಕೊಡಿಸಲಿಲ್ಲ
-ಮಾಣಿಕ ಆರ್.ಭುರೆ 

1 ಕಾಮೆಂಟ್‌:

lingraj ಹೇಳಿದರು...

The actual reality of students in rural villages has been shown very nicely in the poem...i liked it very much